ರೈಲ್ವೇ ಬ್ರಾಡ್ ಗೇಜ್ ಯೋಜನೆ-ಐತೀರ್ಪು
ಪ್ರಕಟಿಸಿದ ದಿನಾಂಕ : 13/11/2019
ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಬ್ರಾಡ್ ಗೇಜ್ ಯೋಜನೆಗೆ ಸಂಬಂಧಿಸಿದ ವರದಿ
ಫೈಲ್ ದಿನಾಂಕ | ಕಡತ ವಿವರಣೆ | ಕಡತ ವೀಕ್ಷಿಸಿ |
---|---|---|
13/11/2019 |
ಚಿಕ್ಕಮಗಳೂರು-ಸಕಲೇಶಪುರ ಹೊಸ ರೈಲು ಮಾರ್ಗಕ್ಕಾಗಿ ಚಿಕ್ಕಮಗಳೂರು ತಾಲ್ಲೂಕು ಅಂಬಳೆ ಹೋಬಳಿ ಗಂಜಲಗೋಡು, ಬಾಣಾವರ,ಹಳುವಳ್ಳಿ,ಹಾದಿಹಳ್ಳಿ,ಮಳಲೂರು ಮತ್ತು ಅಂಬಳೆ ಗ್ರಾಮಗಳಲ್ಲಿ ಒಟ್ಟು 131-29-04-00 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಸಂಬಂಧವಾಗಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರದ ಸಚಿವಾಲಯ, ಕಂದಾಯ ಇಲಾಖೆ, ಬೆಂಗಳೂರು ಇವರ ಅವಾರ್ಡ ಅನುಮೋದನೆ ಸಂಖ್ಯೆ ಕಂ ಇ 13 ಭೂ ಸ್ವಾ ಚಿ 2017 ದಿನಾಂಕ:03-10-2019ರಂತೆ ಐತೀರ್ಪು ಅನುಮೋದನೆಯಾಗಿದ್ದು, ಅನುಮೋದನೆಯಾದ ಐತೀರ್ಪಿನ ಪ್ರತಿಯನ್ನು ಸಾರ್ವಜನಿಕ ವೀಕ್ಷಣೆಗಾಗಿ ಜಿಲ್ಲಾಧಿಕಾರಿಗಳ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಯನ್ನು ಉಪ ವಿಭಾಗಾಧಿಕಾರಿ ಹಾಗೂ ಭೂಸ್ವಾಧೀನಾಧಿಕಾರಿ ಕಂದಾಯ ಉಪ ವಿಭಾಗ, ಚಿಕ್ಕಮಗಳೂರು, ಜಿಲ್ಲಾಧಿಕಾರಿಗಳ ಕಛೆರಿ ಆವರಣ ಇವರ ಕಛೇರಿಯಲ್ಲಿ ಹಾಜರಾಗಿ ಪಡೆಯಬಹುದಾಗಿದೆ ಎಂದು ತಿಳಿಸಿದೆ |
|
03/10/2018 |
ಚಿಕ್ಕಮಗಳೂರು-ಸಕಲೇಶಪುರ ಹೊಸ ರೈಲು ಮಾರ್ಗಕ್ಕಾಗಿ ಚಿಕ್ಕಮಗಳೂರು ತಾಲ್ಲೂಕು ಅಂಬಳೆ ಹೋಬಳಿ ಗಂಜಲಗೋಡು, ಬಾಣಾವರ,ಹಳುವಳ್ಳಿ,ಹಾದಿಹಳ್ಳಿ,ಮಳಲೂರು ಮತ್ತು ಅಂಬಳೆ ಗ್ರಾಮಗಳಲ್ಲಿ ಒಟ್ಟು 131-29-04-00 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಸಂಬಂಧವಾಗಿ ಸರ್ಕಾರದ ಆದೇಶ ಸಂಖ್ಯೆ ಕಂ.ಇ. 13 ಭೂ ಸ್ವಾ ಚಿ 2017 ದಿನಾಂಕ:14-08-2018ರಂತೆ ಭೂಸ್ವಾಧೀನ ಕಾಯಿದೆ ಕಲಂ 19(1)(2) ರನ್ವಯ ಅಂತಿಮ ಘೋಷಣೆ ಮಾಡಲಾಗಿದ್ದು ಈ ಬಗ್ಗೆ ದಿನಾಂಕ:30-08-2018ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಭಾಗ-6ಎ ರ ಪುಟ ಸಂಖ್ಯೆ 647 ರಿಂದ 675ರ ವರೆಗೆ ಪ್ರಕಟಗೊಂಡಿರುವುದರಿಂದ ಈ ಬಗ್ಗೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ಬಗ್ಗೆ ಮಾಹಿತಿಗಾಗಿ ಸಾರ್ವಜನಿಕ ವೀಕ್ಷಣೆಗಾಗಿ ಡಿಸ್ಟಿಕ್ ವೆಬ್ ಸೈಟ್ ನಲ್ಲಿ ಅಳವಡಿಸಿದೆ. ಭೂ ಮಾಲೀಕರು ಹಾಗೂ ಸಾರ್ವಜನಿಕರು ನೋಡಿಕೊಳ್ಳಲು ತಿಳಿಸಿದೆ. |
ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಬ್ರಾಡ್ ಗೇಜ್ ಯೋಜನೆಗೆ ಸಂಬಂಧಿಸಿದ ಕರ್ನಾಟಕ ರಾಜ್ಯ ಪತ್ರ(5 MB) |