ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಚಿಕ್ಕಮಗಳೂರು:
ಕೇಂದ್ರ ಸರ್ಕಾರವು ಆರ್ಥಿಕವಾಗಿ ಸದೃಢವಲ್ಲದ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ನ್ನು ಜಾರಿಗೆ ತಂದಿದ್ದು, ಸದರಿ ಕಾಯ್ದೆಯಡಿ ಅಂತ್ಯೋದಯ ಅನ್ನ ಯೋಜನೆಯ (ಎಎ) ಪ್ರತಿ ಪಡಿತರ ಚೀಟಿಗೆ 35 ಕೆ.ಜಿ. ಹಾಗೂ ಆದ್ಯತಾ (ಪಿಹೆಚ್‌ಹೆಚ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ. ಆಹಾರಧಾನ್ಯವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯನ್ನು ಜುಲೈ 2023ರಿಂದ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಸದರಿ ಯೋಜನೆಯಡಿ ಅಂತ್ಯೋದಯ ಮತ್ತು ಆದ್ಯತಾ (ಪಿಹೆಚ್‌ಹೆಚ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ.
2024-25ನೇ ಸಾಲಿನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳ ವಿವರ:
1. ಎನ್.ಎಫ್.ಎಸ್.ಎ. ಯೋಜನೆ:
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ -2013ರನ್ವಯ ಪ್ರತಿ ಎಎವ್ಯ ಪಡಿತರ ಚೀಟಿಗೆ 35 ಕೆ.ಜಿ. ಹಾಗೂ ಪ್ರತಿ ಆದ್ಯತಾ ಪಡಿತರ ಚೀಟಿ ಸದಸ್ಯರಿಗೆ 5 ಕೆ.ಜಿ. ಆಹಾರಧಾನ್ಯವನ್ನು (ಅಕ್ಕಿ +ರಾಗಿ) ಉಚಿತವಾಗಿ ವಿತರಿಸಲಾಗಿರುತ್ತದೆ.
2. ಅನ್ನಭಾಗ್ಯ ಯೋಜನೆ – ನೇರ ನಗದು ವರ್ಗಾವಣೆ (ಡಿಬಿಟಿ):
ಜುಲೈ 2023ರ ಮಾಹೆಯಿಂದ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5 ಕೆ.ಜಿ. ಆಹಾರಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆ.ಜಿ. ಆಹಾರಧಾನ್ಯವನ್ನು ಸೇರಿಸಿ, ಒಟ್ಟು 10 ಕೆ.ಜಿ. ಆಹಾರಧಾನ್ಯವನ್ನು ಪೂರೈಸಲು ನಿರ್ಧರಿಸಿದ್ದು, ಹೆಚ್ಚುವರಿ ಆಹಾರಧಾನ್ಯ ಪೂರೈಕೆಯಾಗುವವರೆಗೆ 5 ಕೆ.ಜಿ. ಆಹಾರಧಾನ್ಯದ ಬದಲಾಗಿ ಪ್ರತಿ ಸದಸ್ಯರಿಗೆ ಪ್ರತಿ ಕೆ.ಜಿ.ಗೆ ರೂ.34/-ರಂತ ಪಡಿತರ ಚೀಟಿಯಲ್ಲಿನ ಕುಟುಂಬದ ಹಿರಿಯ ಮಹಿಳಾ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನು ವರ್ಗಾಯಿಸಲು ಸರ್ಕಾರವು ಆದೇಶಿಸಿದ್ದು, ಅದರಂತೆ 2024-25ನೇ ಸಾಲಿನಲ್ಲಿ ಏಪ್ರಿಲ್ ಮಾಹೆಯಿಂದ ಡಿಸೆಂಬರ್ ಮಾಹೆಯವರೆಗೆ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳಿಗೆ ಹಣವನ್ನು ಜಮೆ ಮಾಡಲಾಗಿದ್ದು, ಜನವರಿ 2025ರ ಮಾಹೆಯಲ್ಲಿ ಸರ್ಕಾರವು ಹಣದ ಬದಲಾಗಿ ಅಕ್ಕಿಯನ್ನು ವಿತರಿಸಲು ತೀರ್ಮಾನಿಸಿದ್ದು, ಅದರಂತೆ ಫೆಬ್ರವರಿ 2025ರ ಮಾಹೆಯಿಂದ 5 ಕೆ.ಜಿ. ಹೆಚ್ಚುವರಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.
3. ಕನಿಷ್ಠ ಬೆಂಬಲ ಬೆಲೆ ಯೋಜನೆ 2024-25:
2024-25ರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ಭತ್ತ, ರಾಗಿ ಮತ್ತು ಬಿಳಿಜೋಳಕ್ಕೆ ಸರ್ಕಾರದಿಂದ ಈ ಕೆಳಕಂಡಂತ ದರ ನಿಗದಿಗೊಳಿಸಲಾಗಿದೆ.
| ಕ್ರ. ಸಂ. | ಧಾನ್ಯ | ರೇಟು (ಪ್ರತಿ ಕ್ವಿಂ) ರೂ. ಗಳಲ್ಲಿ |
|---|---|---|
| 1 | ಭತ್ತ-ಸಾಮಾನ್ಯ | 2300.00 |
| 2 | ಭತ್ತ ಗ್ರೇಡ್-ಎ | 2320.00 |
| 3 | ಬಿಳಿಜೋಳ ಹೈಬ್ರಿಡ್ | 3371.00 |
| 4 | ಬಿಳಿಜೋಳ ಮಾಲ್ಕಂಡಿ | 3421.00 |
| 5 | ರಾಗಿ | 4290.00 |
ರಾಗಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ 8 ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 18,463 ರೈತರು 3,04,966.00 ಕ್ಕಿಂ. ರಾಗಿ ಮಾರಾಟ ಮಾಡಲು ನೊಂದಣಿ ಮಾಡಿಕೊಂಡಿದ್ದು, ದಿನಾಂಕ:30.06.2025ರವರೆಗೆ 16,825 ರೈತರಿಂದ ಒಟ್ಟು 2,96,252.50 ಕ್ಕಿಂ. ರಾಗಿಯನ್ನು ಈ ಕೆಳಕಂಡಂತೆ ಖರೀದಿಸಲಾಗಿರುತ್ತದೆ.
| ಕ್ರ. ಸಂ. | ಖರೀದಿ ಕೇಂದ್ರಗಳು | ಖರೀದಿ ಏಜೆನ್ಸಿ | ರೈತರ ಸಂಖ್ಯೆ | ಖರೀದಿಸಿದ ರಾಗಿ ಪ್ರಮಾಣ (ಕ್ವಿಂ. ಗಳಲ್ಲಿ) |
|---|---|---|---|---|
| 1 | ಎಪಿಎಂಸಿ ಯಾರ್ಡ್, ಚಿಕ್ಕಮಗಳೂರು | ಕರ್ನಾಟಕ ರಾಜ್ಯ ಸಹಕಾರ ಮಾರಟ ಮಹಾಮಂಡಳಿ ನಿ. ಚಿಕ್ಕಮಗಳೂರು ಶಾಖೆ | 951 | 15471.00 |
| 2 | ಎಪಿಎಂಸಿ ಯಾರ್ಡ್, ಕಡೂರು – 1 |
ಕರ್ನಾಟಕ ರಾಜ್ಯ ಸಹಕಾರ ಮಾರಟ ಮಹಾಮಂಡಳಿ ನಿ. ಕಡೂರು ಶಾಖೆ |
3622 | 63671.00 |
| 3 | ಎಪಿಎಂಸಿ ಯಾರ್ಡ್, ಕಡೂರು – 2 | 2656 | 45791.00 | |
| 4 | ಎಪಿಎಂಸಿ ಯಾರ್ಡ್, ಬಿರೂರು | 11737 | 30255.50 | |
| 5 | ಎಪಿಎಂಸಿ ಯಾರ್ಡ್, ಪಂಚನಹಳ್ಳಿ – 1 |
1786 | 32358.00 | |
| 6 | ಎಪಿಎಂಸಿ ಯಾರ್ಡ್, ಪಂಚನಹಳ್ಳಿ – 2 |
1758 | 31532.50 | |
| 7 | ಎಪಿಎಂಸಿ ಯಾರ್ಡ್, ತರೀಕೆರೆ | 1436 | 26348.00 | |
| 8 | ಎಪಿಎಂಸಿ ಯಾರ್ಡ್, ಅಜ್ಜಂಪುರ | 2879 | 50825.50 | |
|
ಒಟ್ಟು |
16825 | 296252.50 | ||
ಭತ್ತ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 4 ಭತ್ತ ಖರೀದಿ ಕೇಂದ್ರಗಳನ್ನುತೆರೆಯಲಾಗಿದ್ದು, ಒಟ್ಟು 05 ಜನ ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಯಾವುದೇ ರೈತರು ಖರೀದಿ ಕೇಂದ್ರಕ್ಕೆ ಭತ್ತವನ್ನು ಮಾರಾಟ ಮಾಡಿರುವುದಿಲ್ಲ.
|
ಕ್ರ. ಸಂ.
|
ತಾಲ್ಲೂಕು
|
ಒಟ್ಟು ನ್ಯಾಯಬೆಲೆ ಅಂಗಡಿಗಳ ಸಂಖ್ಯೆ
|
ಪಿ.ಓ.ಎಸ್. ನ್ಯಾಯಬೆಲೆ ಅಂಗಡಿಗಳ ಸಂಖ್ಯೆ
|
ನಾನ್-ಪಿ.ಓ.ಎಸ್. ನ್ಯಾಯಬೆಲೆ ಅಂಗಡಿಗಳ ಸಂಖ್ಯೆ
|
|
1
|
ಚಿಕ್ಕಮಗಳೂರು | 114 | 112 | 2 |
|
2
|
ಕಡೂರು | 156 | 156 | 0 |
|
3
|
ಕೊಪ್ಪ | 47 | 45 | 2 |
|
4
|
ಮೂಡಿಗೆರೆ | 67 | 62 | 5 |
|
5
|
ನ.ರಾ.ಪುರ | 30 | 29 | 1 |
|
6
|
ಶೃಂಗೇರಿ | 22 | 22 | 0 |
|
7
|
ತರೀಕೆರೆ | 59 | 59 | 0 |
|
8
|
ಅಜ್ಜಂಪುರ | 36 | 36 | 0 |
|
ಒಟ್ಟು
|
531
|
521
|
10
|
|
|
ಕ್ರ. ಸಂ.
|
ತಾಲ್ಲೂಕು
|
ಎ.ಎ.ವೈ.
|
ಪಿ.ಹೆಚ್. ಹೆಚ್.
|
ಎನ್.ಪಿ.ಹೆಚ್..ಹೆಚ್.
|
ಒಟ್ಟು
|
ಪಿ.ಹೆಚ್.ಹಚ್.
ಸದಸ್ಯರ ಸಂಖ್ಯೆ |
| 1 | ಚಿಕ್ಕಮಗಳೂರು ಅ.ಪ.ಪ್ರ. | 697 | 19497 | 13116 | 33310 | 65723 |
| 2 | ಚಿಕ್ಕಮಗಳೂರು ತಾಲ್ಲೂಕು | 3425 | 40699 | 8305 | 52429 | 132692 |
| 3 | ಕಡೂರು | 5326 | 61144 | 7871 | 74341 | 206603 |
| 4 | ತರೀಕೆರೆ | 2355 | 29775 | 8112 | 40242 | 95222 |
| 5 | ಮೂಡಿಗೆರ | 2662 | 20761 | 10060 | 33483 | 68698 |
| 6 | ಕೊಪ್ಪ | 2462 | 12257 | 6006 | 20725 | 40565 |
| 7 | ನ.ರಾ.ಪುರ | 2148 | 10735 | 5043 | 17926 | 34769 |
| 8 | ಶೃಂಗೇರಿ | 839 | 5330 | 2900 | 9069 | 16653 |
| 9 | ಅಜ್ಜಂಪುರ | 2101 | 15839 | 4186 | 22126 | 52581 |
|
ಒಟ್ಟು
|
22015 | 216037 | 65599 | 303651 | 713506 | |
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಚಿಕ್ಕಮಗಳೂರು ಜಿಲ್ಲೆ. ದೂರವಾಣಿ ಸಂಖ್ಯೆ: 08262-237715









