ಮುಚ್ಚಿ

ಸ್ವಚ್ಚ ಭಾರತ್ ಮಿಷನ್

Jilla Utsava

ಸ್ವಚ್ಚ ಭಾರತ್ ಮಿಷನ್ (ಗ್ರಾ)

ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು

ಆರೋಗ್ಯ ಮತ್ತು ನೈರ್ಮಲ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ನೈರ್ಮಲ್ಯ ಇರುವಲ್ಲಿ ಆರೋಗ್ಯ ಇರುತ್ತದೆ. ನೈರ್ಮಲ್ಯದ ಕೊರತೆ ಇದ್ದಲ್ಲಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಜನ ಸಾಮಾನ್ಯರು ಆರೋಗ್ಯವಾಗಿದ್ದಲ್ಲಿ ಅವರ ಜೀವನ ಮಟ್ಟ ಉತ್ತಮವಾಗಲು ಸಾಧ್ಯ. ಶೇ 80 ರಷ್ಟು ಆರೋಗ್ಯದ ಸಮಸ್ಯೆಗಳು ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತದೆ. ಜನ ಸಾಮಾನ್ಯರು ಅರಿವಿನ ಕೊರತೆಯಿಂದಾಗಿ ನಿರ್ಮಲ ಸೌಲಭ್ಯಗಳನ್ನು ಹೊಂದಲು ಮುಂದೆ ಬರುತ್ತಿಲ್ಲ. ಈ ವಿಷಯವನ್ನು ಮನಗಂಡು ಸರ್ಕಾರ ‘ ಸಂಪೂರ್ಣ ಸ್ವಚ್ಛತಾ ಆಂದೋಲನ’ (TSC-Total Sanitation Campaign) ಜಾರಿಗೆ ತಂದಿದ್ದು, ಕರ್ನಾಟಕದ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ದಿನಾಂಕ:02.10.2005 ರಿಂದ ಜಾರಿಗೆ ಬಂದಿರುತ್ತದೆ.

ಸಂಪೂರ್ಣ ಸ್ವಚ್ಛತಾ ಆದೋಲನದಲ್ಲಿ ವೈಯುಕ್ತಿಕ ಶೌಚಾಲಯ,ಶಾಲಾ ಶೌಚಾಲಯ, ಅಂಗನವಾಡಿ ಶೌಚಾಲಯ ಮತ್ತು ಸಮುದಾಯ ಸಮುಚ್ಚಯ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ದಿನಾಂಕ: 01.04.2012 ರಿಂದ ‘ಸಂಪೂರ್ಣ ಸ್ವಚ್ಚತಾ ಆಂದೋಲನ’ (TSC), ‘ನಿರ್ಮಲ ಭಾರತ ಅಭಿಯಾನ(NBA)’ ಎಂಬ ಹೆಸರಿಂದ ಅನುಷ್ಟಾನಕ್ಕೆ ಬಂದಿತು. ‘ನಿರ್ಮಲ ಭಾರತ ಅಭಿಯಾನ’ದಲ್ಲಿ TSC ಘಟಕಾಂಶಗಳೊಂದಿಗೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕಲ್ಪಿಸಲಾಯಿತು. 2012 ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ಪರಿಸ್ಥಿತಿ ಬಗ್ಗೆ ಗ್ರಾಮ ಪಂಚಾಯಿತಿಗಳ ಮೂಲಕ ಸಮೀಕ್ಷೆ ನಡೆಸಲಾಯಿತು. ಈ ಸಮೀಕ್ಷೆ ಪ್ರಕಾರ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 72239 ಶೌಚಾಲಯ ರಹಿತ ಕುಟುಂಬಗಳಿರುವುದು ತಿಳಿದು ಬಂದಿತು. ಸಮೀಕ್ಷೆಯ ಕುಟುಂಬವಾರು ಮಾಹಿತಿಯನ್ನು ಕೇಂದ್ರ ಸರ್ಕಾರದ ಈ ಯೋಜನೆಯ ವೆಬ್ ಸೈಟ್ ನಲ್ಲಿ ದಾಖಲಿಸಲಾಯಿತು. ದಿನಾಂಕ: 01.04.2012 ರಿಂದ ಶೌಚಾಲಯ ನಿರ್ಮಿಸಿಕೊಂಡ ಎಲ್ಲಾ ಬಿ.ಪಿ.ಎಲ್ ಫಲಾನುಭವಿಗಳಿಗೆ ಹಾಗೂ ನಿರ್ಬಂಧಿತ ಎ.ಪಿ.ಎಲ್ ಕುಟುಂಬಗಳಿಗೆ (ಸಣ್ಣ ಮತ್ತು ಅತಿಸಣ್ಣ ರೈತರು, ಭೂರಹಿತ ನಿವಾಸಿಗಳು, ಮಹಿಳಾ ಪ್ರಧಾನ ಕುಟುಂಬಗಳು ಹಾಗೂ ವಿಕಲಚೇತನರಿರುವ ಕುಟುಂಬಗಳು – ಎ.ಪಿ.ಎಲ್ ಆಗಿದ್ದಲ್ಲಿ ಸಹ ಅವರಿಗೆ ಸೌಲಭ್ಯ ವಿತರಿಸಲಾಯಿತು.) ರೂ.4700/- ಹಾಗೂ ಮಹಾತ್ಮಾ ಗಾಂಧೀ ರಾಷ್ಟೀಯ ಉದ್ಯೋಗ ಖಾತರಿ ಯೋಜನೆಯಡಿ ರೂ. 5400/- ವರಗೆ ಶೌಚಾಲಯ ನಿರ್ಮಾಣದ ಕೂಲಿ ಪಾವತಿಸಲು ಅವಕಾಶ ಕಲ್ಪಿಸಲಾಯಿತು. ಈ ಯೋಜನೆಯಡಿ ಶೌಚಾಲಯ ರಹಿತ ಎಲ್ಲಾ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ಶೌಲಭ್ಯ ಒದಗಿಸಲಾಯಿತು. ದಿನಾಂಕ:02.10.2014 ರಿಂದ ನಿರ್ಮಲ ಭಾರತ ಅಭಿಯಾನ ಯೋಜನೆಯು ‘ ಸ್ವಚ್ಛ ಭಾರತ್ ಮಿಷನ್’ ಎಂಬ ಹೆಸರಿನಿಂದ ಜಾರಿಗೆ ಬಂದಿತು.

‘ಸ್ವಚ್ಛ ಭಾರತ್ ಮಿಷನ್’ ಅಡಿ ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಬಿ.ಪಿ.ಎಲ್ ಮತ್ತು ಗುರುತಿಸಲಾದ ಎ.ಪಿ.ಎಲ್ ಕುಟುಂಬಗಳಿಗೆ ರೂ.12000/- ಈ ಯೋಜನೆಯಿಂದಲೇ ಪಾವತಿಸಲು ಅವಕಾಶ ಕಲ್ಪಿಸಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುರಿಯಾಗಿ ರೂ.3000/- ಪಾವತಿಸಲಾಗುತ್ತಿದೆ. ಪ್ರಾರಂಭದಲ್ಲಿ ಯೋಜನೆಯ ವೆಚ್ಚದ ಹಂಚಿಕೆಯ ಪಾಲು 75%(ಕೇಂದ್ರ), 25%(ರಾಜ್ಯ) ನಿಗದಿಯಾಗಿತ್ತು. ಆದರೆ 2015-16 ನೇ ಸಾಲಿನಿಂದ 60%(ಕೇಂದ್ರ) ಮತ್ತು 40%(ರಾಜ್ಯ) ಕ್ಕೆ ಮರುನಿಗಧಿಯಾಗಿದೆ. 2012 ರ ಬೇಸ್ ಲೈನ್ ಸರ್ವೆಯಂತೆ ಚಿಕ್ಕಮಗಳೂರು ಜಿಲ್ಲೆಯು ಅಕ್ಟೋಬರ್-02-2017 ರಂದು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. (2012 ರ ಸಮೀಕ್ಷೆಯಲ್ಲಿ ಬಿಟ್ಟು ಹೋದ ಕುಟುಂಬಗಳ LOB ಮತ್ತು NOLB ಹೊಸ ಸೇರ್ಪಡೆಗೆ (Add New) ಸಹ ಅವಕಾಶ ಕಲ್ಪಿಸಲಾಗಿದೆ).

ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ಫೋಟೋ, ವೀಡಿಯೋ ತುಣುಕುಗಳು ಮತ್ತು ವರದಿಗಳನ್ನು facebook page ನಲ್ಲಿ ಇಂದೀಕರಿಸಲಾಗುತ್ತದೆ. ಈ ಜಿಲ್ಲೆಯ facebook page. https://www.facebook.com/ZPChikkamagaluru/