ಮುಚ್ಚಿ

ಜಿಲ್ಲಾಧಿಕಾರಿಗಳ ಕಾರ್ಯಾಲಯ

ಜಿಲ್ಲಾಧಿಕಾರಿಯವರ ಕಛೇರಿಯು ನಗರದ ಹೃದಯ ಭಾಗದಲ್ಲಿದೆ.  ಜನಗಳು ತಮ್ಮ ಕುಂದುಕೊರತೆಗಳನ್ನು ತಂದು ಪರಿಹಾರವನ್ನು ಹೊಂದಲು ಜಿಲ್ಲಾಧಿಕಾರಿಯವರ ಕಛೇರಿಗೆ ಬರುತ್ತಾರೆ.  ಇಡೀ ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಯ ಹೊಣೆ ಜಿಲ್ಲಾಧಿಕಾರಿಯವರಿಗೆ ಸೇರಿದೆ.  ಅದಲ್ಲದೇ, ಭೂಮಿ, ಪರಿಹಾರಗಳು ಇನ್ನಿತರೆ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಕಛೇರಿಯಲ್ಲಿ ನಿರ್ವಹಿಸಲಾಗುತ್ತದೆ.

ಆಡಳಿತಾತ್ಮಕ ರಚನೆ

ಜಿಲ್ಲಾಧಿಕಾರಿಯವರು ಜಿಲ್ಲೆಯ ಕ್ರಿಯಾತ್ಮಕ ಮುಖ್ಯಸ್ಥರಾಗಿರುತ್ತಾರೆ.  ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಅವರ ಸಹಾಯಕ್ಕಾಗಿ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರುಗಳು, ಉಪತಹಸೀಲ್ದಾರರುಗಳು, ಶಿರಸ್ತೇದಾರರುಗಳು, ಕಂದಾಯ ನಿರೀಕ್ಷಕರುಗಳು, ಗ್ರಾಮ ಲೆಕ್ಕಾಧಿಕಾರಿಗಳು, ಇವರುಗಳನ್ನೊಳಗೊಂಡಂತೆ ವಿವಿಧ ಅಧಿಕಾರಿಗಳು ಇರುತ್ತಾರೆ. 

meena-nagraj
ಶ್ರೀಮತಿ ಮೀನಾ ನಾಗರಾಜ್ ಸಿ.ಎನ್ , ಭಾ.ಆ.ಸೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ

ಶ್ರೀ ನಾರಾಯಣರಡ್ಡಿ ಕನಕರಡ್ಡಿ, ಕ.ಆ.ಸೇ.

ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ

ಶ್ರೀ ದಲ್ಜೀತ್ ಕುಮಾರ್, ಭಾ.ಆ.ಸೇ

ಉಪ-ವಿಭಾಗಾಧಿಕಾರಿ ಮತ್ತು ಉಪ-ವಿಭಾಗೀಯ ದಂಡಾಧಿಕಾರಿ, ಚಿಕ್ಕಮಗಳೂರು

ಶ್ರೀ ಕಾಂತರಾಜ ಕೆ ಜೆ ,ಕ.ಆ.ಸೇ.

ಉಪ-ವಿಭಾಗಾಧಿಕಾರಿ ಮತ್ತು ಉಪ-ವಿಭಾಗೀಯ ದಂಡಾಧಿಕಾರಿ, ತರಿಕೇರೆ

                                             ಸಭೆಯ ನಡಾವಳಿಗಳು
ಕ್ರಮ ಸಂಖ್ಯೆ ನಡವಳಿಗಳು ಕಡತ ವೀಕ್ಷಿಸಿ
1 RO ಗಳ ಸಭೆಯ ಪ್ರಕ್ರಿಯೆಗಳು RO ಗಳ ಸಭೆಯ ಪ್ರಕ್ರಿಯೆಗಳು

 

ಚಿಕ್ಕಮಗಳೂರು ಜಿಲ್ಲೆಯ ಕಂದಾಯ ಗ್ರಾಮಗಳು ಮತ್ತು ವೃತ್ತಗಳು

 

ಯೋಜನೆಗಳು

ವಸತಿ (ಆಶ್ರಯ, ಅಂಬೇಡ್ಕರ್), ನೆರಳಿನ ಭಾಗ್ಯ, SJSRY, ಆರಾಧನಾ, ಆಶಾಕಿರಣ, MPLAD, OAP, PHP, ವಿಧನಾ ವೇತನ, ವಿಫಲವಾದ ಬಾವಿ ಪರಿಹಾರ ಯೋಜನೆ, ಪ್ರಕೃತಿ ವಿಕೋಪದ ಪರಿಹಾರ ಕಾರ್ಯ (CRW) ಇವುಗಳು ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಕಾರ್ಯರೂಪಕ್ಕೆ ತರುವ ಯೋಜನೆಗಳಲ್ಲಿ ಕೆಲವು.

ಗಣಕೀಕರಣದ ಸಾಧನೆಗಳು

ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಂಪ್ಯೂಟರ್ ಗಳನ್ನು ಬಳಸಲಾಗುತ್ತಿದೆ.  ಚಿಕ್ಕಮಗಳೂರು ಜಿಲ್ಲಾ ಕಛೇರಿಯ ಬಹಳಷ್ಟು ಚಟುವಟಿಕೆಗಳು ಗಣಕೀಕೃತಗೊಂಡಿವೆ. ತಾಲ್ಲೂಕು ಕೇಂದ್ರಗಳಲ್ಲಿ ತಹಸೀಲ್ದಾರರ ಕಛೇರಿಗಳಿಗೂ ಸಹಾ ಗಣಕಯಂತ್ರಗಳನ್ನು ಅಳವಡಿಸಲಾಗಿದೆ ಮತ್ತು ಪಹಣಿ ನಿರ್ವಹಣೆಯನ್ನು ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. 

  1. ಭೂ ದಾಖಲೆಗಳ ಗಣಕೀಕರಣ
    • ಚಿಕ್ಕಮಗಳೂರು ಜಿಲ್ಲೆಯಲ್ಲಿ, ಎಲ್ಲಾ ಪಹಣಿಗಳೂ ಗಣಕೀಕರಣಗೊಂಡಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 8 ಲಕ್ಷ ಭೂಮಾಲೀಕರಿದ್ದು ಮತ್ತು ನ್ಯಾಯಸಮ್ಮತ ಮಾಲೀಕರುಗಳಿಗೆ ಗಣಕೀಕೃತ ಪಹಣಿಗಳನ್ನು ನೀಡಲಾಗಿದೆ. 
  2. ಮತದಾರರ ಪಟ್ಟಿ ಗಣಕೀಕರಣ
    •  ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ಮತದಾರರಪಟ್ಟಿಗಳನ್ನೂ ಗಣಕೀಕರಣಗೊಳಿಸಲಾಗಿದೆ ಮತ್ತು ಮಾಹಿತಿಗಾಗಿ ಈ ವೆಬ್ ಸೈಟಿನ ಮುಖಪುಟದಲ್ಲಿ ಲಿಂಕನ್ನು ಕೊಡಲಾಗಿದೆ. 
  3. ಜಿಲ್ಲಾಧಿಕಾರಿ ಕಛೇರಿಯ ಯಾಂತ್ರೀಕೃತ ವ್ಯವಸ್ಥೆ 
    • ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಿಸಿಬಿ, ಲೆಕ್ಕಪತ್ರಗಳು, ಸಂಬಳ ಸಂಸ್ಕರಣೆ, ಜನರಲಿಂಗ್, ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಚಟುವಟಿಕೆಗಳು, ಆರ್ ಎಮ್ ಐ ಎಸ್, ರೆಕಾರ್ಡ್ ರೂಂ ಚಟುವಟಿಕೆಗಳು, ಇತ್ಯಾದಿಗಳಿಗಾಗಿ ಬೇರೆ ಬೇರೆ ಪ್ಯಾಕೇಜುಗಳನ್ನು ಅಭಿವೃದ್ಧಿಗೊಳಿಸಲಾಗಿದೆ.

ಯಾವ ಸ್ಥಳಕ್ಕೆ ಸಂಪರ್ಕಿಸಬೇಕು?

ಜನಗಳು ಜಿಲ್ಲಾ ಮಟ್ಟದ ಕಛೇರಿಗೆ ಬೇರೆ ಬೇರೆ ತರಹದ ಕುಂದುಕೊರತೆಗಳನ್ನು ತೆಗೆದುಕೊಂಡು ಬರುತ್ತಿರುತ್ತಾರೆ.  ಬಹಳಷ್ಟು ಸಲ ಅವರಿಗೆ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಯಾರನ್ನು ಸಂಪರ್ಕಿಸಬೇಕು, ಎಷ್ಟು ಸಲ ಬರಬೇಕಾಗುತ್ತದೆ ಇತ್ಯಾದಿಗಳ ಬಗ್ಗೆ ತಿಳಿದಿರುವುದಿಲ್ಲ.  ಇಲ್ಲಿ ಒಂದು ಸಣ್ಣ ಉಪಯುಕ್ತ ಮಾಹಿತಿ ಇದೆ –

ಜಿಲ್ಲಾಧಿಕಾರಿ ಕಛೇರಿಯು ಹಲವು ವಿಭಾಗಗಳನ್ನು ಹೊಂದಿದ್ದು, ಪ್ರತಿಯೊಂದು ವಿಭಾಗವು ಒಂದರೊಡನಿನ್ನೊಂದು ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತವೆ.