ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್
ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಶಾಸನಬದ್ದ ಸಂಸ್ಥೆಯಾಗಿದ್ದು, ಲಾಭರಹಿತ ಸಂಸ್ಥೆಯಾಗಿರುತ್ತದೆ ಹಾಗೂ ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಟ್ರಸ್ಟ್ ಅನ್ನು ಸ್ಥಾಪಿಸುತ್ತದೆ. ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ), 1957, ಕಾಯ್ದೆಯ ಸೆಕ್ಷನ್ 9ಬಿ ಯ 26th ಮಾರ್ಚ್ 2015 ರ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ), 2015, ಕಾಯ್ದೆಯ ತಿದ್ದುಪಡಿಯಿಂದ ಕಾನೂನು ಸ್ಥಾನಮಾನವನ್ನು ಪಡೆದುಕೊಂಡಿರುತ್ತದೆ, ಈ ತಿದ್ದುಪಡಿಯು 12 ಜನವರಿ 2015 ರಿಂದ ಜಾರಿಗೆ ಬಂದಿರುತ್ತದೆ.
ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ನ ಗುರಿ ಮತ್ತು ಉದ್ದೇಶಗಳು
ಜಿಲ್ಲೆಯಲ್ಲಿನ ಗಣಿಗಾರಿಕೆ ಸಂಬಂಧಿತ ಚಟುವಟಿಕೆಗಳಿಂದ ಬಾಧಿತಗೊಂಡ ವ್ಯಕ್ತಿಗಳ ಹಾಗೂ ಪ್ರದೇಶಗಳ ಹಿತಾಸಕ್ತಿ ಮತ್ತು ಪ್ರಯೋಜನಕ್ಕಾಗಿ ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಿದ ರೀತಿಯಲ್ಲಿ ಕೆಲಸ ಮಾಡುವುದು.
ಉದ್ದೇಶಗಳು
- ಗಣಿಗಾರಿಕೆಯಿಂದ ಬಾಧಿತ ಪ್ರದೇಶಗಳಲ್ಲಿನ ವಿವಿಧ ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳಿಗೆ ಅಥವಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಂಸ್ಥೆಗಳಿಗೆ ನಿಧಿಯನ್ನು ಒದಗಿಸುವುದು.
- ಗಣಿಗಾರಿಕೆ ಜಿಲ್ಲೆಯಲ್ಲಿನ ಜನರಿಗೆ ಗಣಿಗಾರಿಕೆಯ ಸಮಯದಲ್ಲಿ ಮತ್ತು ನಂತರ ಪರಿಸರ, ಆರೋಗ್ಯ ಮತ್ತು ಸಾಮಾಜಿಕ- ಆರ್ಥಿಕತೆ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡುವುದು ಅಥವಾ ತಗ್ಗಿಸುವುದು.
- ಗಣಿಕಾರಿಕೆಯಿಂದ ಬಾಧಿತ ಪ್ರದೇಶಗಳಲ್ಲಿನ ಜನರಿಗೆ ದೀರ್ಘಕಾಲಿನ ಸುಸ್ಥಿರ ಜಿವನವನ್ನು ಖಚಿತಪಡಿಸುವುದು.