ಮುಚ್ಚಿ

ಗ್ರಾಮಲೆಕ್ಕಿಗರ ನೇರ ನೇಮಕಾತಿ 2020 ವರ್ಗವಾರು ಅಂತಿಮ ಆಯ್ಕೆ ಪಟ್ಟಿ ವಿವರ

ಪ್ರಕಟಿಸಿದ ದಿನಾಂಕ : 10/01/2022

CKM VA

ಕರ್ನಾಟಕ ಸರ್ಕಾರ

ಗ್ರಾಮಲೆಕ್ಕಿಗರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರ

ಜಿಲ್ಲಾಧಿಕಾರಿಗಳ ಕಛೇರಿ, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 50 ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಪ್ರಕಟಿಸಲಾದ ಅಧಿಸೂಚನೆಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಸದರಿ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ದಿನಾಂಕ: 24-01-2022 ರಂದು ಈ ಕೆಳಕಂಡ ಮೂಲ ದಾಖಲಾತಿಗಳನ್ನು ಹಾಜರುಪಡಿಸುವುದು. ಸದರಿ ದಿನಾಂಕದಂದು ಮೂಲ ದಾಖಲಾತಿಗಳನ್ನು ಸಲ್ಲಿಸದೇ ಇರುವ ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಪಡಿಸಲಾಗುವುದು.
 
1) ದ್ವಿತೀಯ ಪಿ.ಯು.ಸಿ. ಅಂಕಪಟ್ಟಿ
2) ಎಸ್.ಎಸ್ ಎಲ್.ಸಿ. ಅಂಕಪಟ್ಟಿ
3) ಮೀಸಲಾತಿಯಡಿ ಆಯ್ಕೆಯಾದ ಅಭ್ಯರ್ಥಿಗಳ ಜಾತಿ ದೃಢೀಕರಣ ಪತ್ರ
4) ಅಂಗವಿಕಲ ಮೀಸಲಾತಿಯಡಿ ಆಯ್ಕೆಯಾದ ಅಭ್ಯರ್ಥಿಗಳ ಅಂಗವಿಕಲ ದೃಢೀಕರಣ ಪತ್ರ (PHP)
5) ಯೋಜನಾ ನಿರಾಶ್ರಿತರ ಮೀಸಲಾತಿಯಡಿ ಆಯ್ಕೆಯಾದ ಅಭ್ಯರ್ಥಿಗಳ PDP ದೃಢೀಕರಣ ಪತ್ರ 
6) ಮಾಜಿ ಸೈನಿಕರ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ದೃಢೀಕರಣ ಪತ್ರ 
7) ಕನ್ನಡ ಮಾಧ್ಯಮ ಮೀಸಲಾತಿಗೆ ಸಂಬಂಧಿಸಿದ ಧೃಢೀಕರಣ ಪತ್ರ 
8) ಗ್ರಾಮೀಣ ಅಭ್ಯರ್ಥಿ ದೃಢೀಕರಣ ಪತ್ರ 
9) ಸೇವೆಯಲ್ಲಿರುವ ಅಭ್ಯರ್ಥಿಗಳು ಸೇವೆಯಲ್ಲಿರುವ ಬಗ್ಗೆ ಪ್ರಮಾಣ ಪತ್ರ ಮತ್ತು ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿ ಸಲ್ಲಿಸುವ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣಾ ಪತ್ರ