ಮುಚ್ಚಿ

ರಾಷ್ಟ್ರೀಯ ತಂಬಾಕು ನಿಯಂತ್ರಣ ಯೋಜನೆ

ತಂಬಾಕು ಎಂಬ ಸಾಂಕ್ರಾಮಿಕವು ವಿಶ್ವವು ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯದ ದುಷ್ಪರಿಣಾಮಗಳಲ್ಲಿ ಒಂದಾಗಿದೆ, ಪ್ರತಿ ವರ್ಷ ವಿಶ್ವದಾದಂತ್ಯ 80 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಖಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಅ ಸಾವುಗಳಲ್ಲಿ 7 ಮಿಲಿಯನ್ ಗಿಂತಲೂ ಹೆಚ್ಚು ಧೂಮಪಾನಿಗಳಲ್ಲದವರು ಸೆಕೆಂಡ್ ಹ್ಯಾಂಡ್ ಹೊಗೆಗೆ ಪರೋಕ್ಷವಾಗಿ ಪರಿಣಾಮವನ್ನು ಎದುರಿಸುತ್ತಿದ್ದಾರೆ.ವಿಶ್ವಾದಾದ್ಯಂತಇರುವ1.1 ಶತಕೋಟಿಧೂಮಪಾನಿಗಳಲ್ಲಿಸುಮಾರು 80% ರಷ್ಟುಜನಕಡಿಮೆಮತ್ತುಮಧ್ಯಮಆದಾಯದದೇಶಗಳಲ್ಲಿವಾಸಿಸುತ್ತಿದ್ದಾರೆ. ಅಲ್ಲಿತಂಬಾಕುಸಂಬಂಧಿತಕಾಯಿಲೆಮತ್ತುಸಾವಿನಪ್ರಮಾಣಹೆಚ್ಚಾಗಿದೆಮನೆಯದೈನಂದಿನಆಹಾರಮತ್ತುಮೂಲಭೂತಅಗತ್ಯಗಳಿಗೆವೆಚ್ಚಗಳನ್ನುಮಾಡುವಬದಲಾಗಿತಂಬಾಕಿಗೆಖಚ್ಚುಮಾಡುವಮೂಲಕತಂಬಾಕುಬಳಕೆಯುಬಡತನಕ್ಕೆಕಾರಣವಾಗಿದೆ.

ಭಾರತಸರಕಾರ2007-08ರಲ್ಲಿ11ನೇಪಂಚವಾರ್ಷಿಕಯೋಜನೆಯಅವಧಿಯಲ್ಲಿರಾಷ್ಟ್ರೀಯತಂಬಾಕುನಿಯಂತ್ರಣಕಾರ್ಯಕ್ರಮವನ್ನು (ಎನ್.ಟಿ.ಸಿ.ಪಿ) ಪ್ರಾರಂಬಿಸಿತು. ವಿಶ್ವವಯಸ್ಕರತಂಬಾಕುಸಮೀಕ್ಷೆ (ಜಿ.ಎ.ಟಿ.ಎಸ್) 2009-10ರಂತೆತಂಬಾಕುಬಳಕೆಯಪ್ರಮಾಣಯನ್ನುಸೂಚಿಸುತ್ತದೆ. 12ನೇಪಂಚವಾರ್ಷಿಕಯೋಜನೆಯಅಂತ್ಯದವೇಳೆಗೆತಂಬಾಕುಬಳಕೆಯನ್ನು 5% ರಷ್ಟುಕಡಿಮೆಮಾಡುವಗುರಿಯನ್ನು 12ನೇಪಂಚವಾರ್ಷಿಕಯೋಜನೆಯಲ್ಲಿಹಾಕಿಕೊಳ್ಳಲಾಗಿತ್ತು. ಜಿ.ಎ.ಟಿ.ಎಸ್ 2ನೇಸಮೀಕ್ಷೆಯಪ್ರಕಾರತಂಬಾಕುಬಳಸುವವರಸಂಖ್ಯೆಸುಮಾರು81ಲಕ್ಷ [8.1 ದಶಲಕ್ಷ] ಕಡಿಮೆಯಾಗಿದೆ. ಕರ್ನಾಟಕದಎಲ್ಲಾ30ಜಿಲ್ಲೆಗಳಲ್ಲಿಎನ್.ಟಿ.ಸಿ.ಪಿಯನ್ನುಜಾರಿಗೆತರಲಾಗಿದೆ. 2015-16ನೇಸಾಲಿನಲ್ಲಿರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿಜಾರಿಗೆತರುವಮುಖಾಂತರ2015-16ನೇಸಾಲಿನಿಂದಲೂಚಿಕ್ಕಮಗಳೂರುಜಿಲ್ಲೆಯಲ್ಲಿರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನುಅನುಷ್ಠಾನಗೊಳಿಸಲಾಗುತ್ತಿದೆ.

ತಂಬಾಕುಸಸ್ಯದಎಲೆಗಳನ್ನುಕ್ಯೂರಿಂಗ್ಮಾಡಿತಯಾರಿಸಲಾದಒಂದುಉತ್ಪನ್ನ.ಈಸಸ್ಯವುನೀಕೋಟಿಯಾನಾಕುಲಮತ್ತುಸೊಲನೇಸಿಯಿಕುಟುಂಬದಭಾಗವಾಗಿದೆ. ತಂಬಾಕಿನ 20 ಕ್ಕೂಹೆಚ್ಚುಸಸ್ಯಜಾತಿಗಳುಪರಿಚಿತವಾಗಿವೆಯಾದರುನೀಕೋಟಿಯಾನಾಟಬಕಮ್ಮುಖ್ಯವಾಣಿಜ್ಯಬೆಳೆಯಾಗಿದೆಹೆಚ್ಚುಪ್ರಬಲಮತ್ತುಭಿನ್ನಸಸ್ಯಜಾತಿಯಾದನೀಕೋಟಿಯಾನಾರಸ್ಟಿಕಾಕೂಡವಿಶ್ವದಾದ್ಯಂತಬಳಸಲ್ಪಡುತ್ತದೆ. ತಂಬಾಕುಒಂದುಉತ್ತೇಜಕವಾದನೀಕೋಟಿನ್ಕ್ಷಾರಾಭವನ್ನುಹೊಂದಿರುತ್ತದೆಒಣಗಿದತಂಬಾಕುಎಲೆಗಳನ್ನುಮುಖ್ಯವಾಗಿಸಿಗರೇಟ್ಗಳು, ಸಿಗಾರ್ಗಳು, ಚುಂಗಾಣಿತಂಬಾಕುಮತ್ತುಸುಗಂಧಯುಕ್ತಶೀಶಾತಂಬಾಕಿನಲ್ಲಿಧೂಮಪಾನಕ್ಕಾಗಿಬಳಸಲಾಗುತ್ತದೆ. ಅದನ್ನುನಶ್ಯಅಗಿಯುವತಬಾಂಕು, ಅದ್ವಿದತಂಬಾಕುಮತ್ತುಸ್ನೂಸ್ನರೂಪದಲ್ಲಿಸೇವಿಸಲಾಗುತ್ತಿದೆ.

ತಂಬಾಕುಉರಿಸಿಅದರಹೊಗೆಯರುಚಿತೆಗೆದುಕೊಳ್ಳುವಅಥವಾಉಸಿರಿನಮೂಲಕಒಳತೆಗೆದುಕೊಳ್ಳುವುದನ್ನುತಂಬಾಕುಸೇವನೆಯೆಂದುಕರೆಯಲಾಗುತ್ತದೆ.ಈಅಭ್ಯಾಸವುಕ್ರಿ.ಪೂ 5000-3000 ದಷ್ಟುಹಿಂದೆಯೇರೂಢಿಯಲ್ಲಿತ್ತು.ಹಲವಾರುನಾಗರೀಕತೆಗಳಧಾರ್ಮಿಕಆಚರಣೆಗಳಸಂದರ್ಭದಲ್ಲಿಧೂಪವುರಿಸುತ್ತಿದ್ದು, ಇದ್ದುಮುಂದೆಉಪಭೋಗದಅಥವಾಸಾಮಾಜಿಕಸಾಧನವಾಗಿಬಳಕೆಯಾಗತೊಡಗಿತು.ಪ್ರಾಚೀನವಿಶ್ವದಲ್ಲಿತಂಬಾಕನ್ನು 1500ರಅಂತ್ಯಭಾಗದವೇಳೆಗೆಪರಿಚಯಿಸಲಾಯಿತುಮತ್ತುಇದುವ್ಯಾಪಾರಮಾರ್ಗಗಳಮುಖಾಂತರಬೇರೆಸ್ಥಳಗಳನ್ನುತಲುಪತೊಡಗಿತ್ತು.ಜರ್ಮನ್ವಿಜ್ಞಾನಿಗಳು 1920 ರದಶಕದಅಂತ್ಯಭಾಗದಲ್ಲಿಧೂಮಪಾನಮತ್ತುಶ್ವಾಸಕೋಶದಕ್ಯಾನ್ಸರ್ನಡುವಿನಸಂಬಂಧವನ್ನುಪತ್ತೆಹಚ್ಚಿದರಿಂದಆಧುನಿಕಇತಿಹಾಸದಲ್ಲಿಮೊಟ್ಟಮೊದಲಬಾರಿಗೆಧೂಮಪಾನವಿರೋಧೀಚಳುವಳಿಆರಂಭವಾಯಿತು. ಆದರೆ, ಈಚಳುವಳಿಯುಎರಡನೇವಿಶ್ವಯುದ್ದದಸಮಯದಲ್ಲಿವಿರೋಧಪಕ್ಷಗಳನ್ನುತಲುಪದೇಹೋದಕಾರಣದಿಂದಾಗಿದುರ್ಬಲಗೊಂಡುಬಹುಬೇಗನೆಜನಪ್ರಿಯತೆಕಳೆದುಕೊಂಡಿತು.1950 ರಲ್ಲಿಮತ್ತೆಆರೋಗ್ಯಪರಿಣತರುಧೂಮಪಾನಮತ್ತುಶ್ವಾಸಕೋಶದಕ್ಯಾನ್ಸರ್ನಡುವೆಸಂಬಂಧವಿದೆಯೆಂದುಸೂಚಿಸತೊಡಗಿದರು.1980ರದಶಕದಲ್ಲಿದೊರಕಿದವೈಜ್ಞಾನಿಕಸುಳಿವಿನಿಂದಈರೂಢಿಯವಿರುದ್ದರಾಜಕೀಯಕ್ರಮಗಳನ್ನುಕೈಗೊಳ್ಳುವಂತಾಗಿವೆ 1965ರನಂತರತಂಬಾಕುಸೇವನೆಯುಅಭಿವೃದ್ದಿಹೊಂದಿದರಾಷ್ಟ್ರಗಳಲ್ಲಿಏರಿಕೆಯಾಗಿವೆಇಲ್ಲವೇಇಳಿಕೆಯಾಗಿವೆಆದರೆಅಭಿವೃದ್ಧಿಶೀಲರಾಷ್ಟ್ರಗಳಲ್ಲಿಈಸಂಖ್ಯೆಯುಏರಿಕೆಯಾಗುತ್ತಲೆಇದೆ.ಧೂಮಪಾನವುತಂಬಾಕುನ್ನುಸೇವಿಸುವಅತ್ಯಂತಪ್ರಚಲಿತವಿಧಾನವಾಗಿದೆ. ಮತ್ತುಧೂಮಪಾನದಮೂಲಕಸೇವಿಸಲ್ಪಡುವಪದಾರ್ಥಗಳಲ್ಲಿತಂಬಾಕುಅತ್ಯಂತಪ್ರಚಲಿತಪದಾರ್ಥವಾಗಿದೆ.

ಇದರಿಂದಹೊರಡುವಹೊಗೆಯನ್ನುಉಚ್ವಾಸದಮೂಲಕಒಳತೆಗೆದುಕೊಂಡಾಗಇದರಸಕ್ರಿಯವಸ್ತುಸಾರಗಳುಆಲ್ವಿಯೋಲೈಮೂಕಲಶ್ವಾಸಕೋಶದಲ್ಲಿಹೀರಲ್ಪಡುತ್ತವೆ. ಈಸಕ್ರಿಯವಸ್ತುಸಾರಗಳುನರಗಳತುದಿಗಳಲ್ಲಿರಾಸಾಯನಿಕಕ್ರಿಯೆಗಳನ್ನುಂಟುಮಾಡಿಹೃದಯಬಡಿತದವೇಗ, ನೆನಪಿನಶಕ್ತಿ, ಸಕ್ರಿಯತೆಹಾಗೂಪ್ರತಿಕ್ರಿಯಿಸುವಸಮಯದಲ್ಲಿಏರಿಕೆಯನ್ನುಂಟುಮಾಡುತ್ತವೆ. ಡೋಪಾಮೈನ್ಮತ್ತುಇದಾದನಂತರಎಂಡಾರ್ಫಿನಳುಬಿಡುಗಡೆಯಾಗುತ್ತವೆಮತ್ತುಇವನ್ನುಹೆಚ್ಚಾಗಿಸುಮ್ಮಾನವನ್ನುಂಟುಮಾಡುವಪದಾರ್ಥಗಳೆಂದುಹೇಳಲಾಗುತ್ತದೆ.  2000ದಅಂಕಿಅಂಶಗಳಪ್ರಕಾರಸುಮಾರು 1.22 ಬಿಲಿಯಾನ್ಜನರುಧುಮಪಾನದರೂಢಿಯನ್ನಿಟ್ಟುಕೊಂಡಿದ್ದರು. ಹೆಂಗಸರಿಗಿಂತಗಂಡಸರುಧೂಮಪಾನ ಮಾಡುವಸಾಧ್ಯತೆಗಳುಜಾಸ್ತಿಆದರೂವಯಸ್ಸುಕಡಿಮೆಯಾದಂತೆಯೇಈಅಂತರವುಸಹಕಡಿಮೆಯಾಗುತ್ತದೆ. ಧೂಮಪಾನಮಾಡುವಸಾಧ್ಯತೆಗಳುಶ್ರೀಮಂತವರ್ಗಕ್ಕಿಂತಬಡವರ್ಗದಲ್ಲಿಹೆಚ್ಚು, ಹಾಗೂಅಭಿವೃದ್ಧಿಹೊಂದಿದದೇಶಗಳಿಗಿಂತಅಭಿವೃದ್ಧಿಶೀಲದೇಶಗಳಜನರುಹೆಚ್ಚುಧೂಮಪಾನಮಾಡುತ್ತಾರೆಹೆಚ್ಚಿನಧೂಮಪಾನಿಗಳುಹದಿಹರೆಯಅಥವಾತರುಣಾವಸ್ಥೆಯಲ್ಲಿಆರಂಭಮಾಡುತ್ತಾರೆ. ಸಾಧಾರಣವಾಗಿಮೊದಮೊದಲಹಂತಗಳಲ್ಲಿಧೂಮಪಾನದಿಂದಆಹ್ಲಾದದಭಾವನೆಗಳುಉಂಟಾಗಿಧನಾತ್ಮಕಮರುಪಯೋಗಕ್ಕೆಕಾರಣವಾಗುತ್ತವೆ. ಕೆಲವುವ್ಯಕ್ಕತಿಗಳುಹಲವುವರ್ಷಗಳಕಾಲಧೂಮಪಾನಮಾಡುತ್ತಹೋದಹಾಗೇಉಪಸಂಹರಣದಲಕ್ಷಣಗಳಿಂದತಪ್ಪಿಸಿಕೊಳ್ಳುವುದುಮತ್ತುಋಣಾತ್ಮಕಮರುಪಯೋಗಗಳುಮುಖ್ಯವಾದಪ್ರೇರಕಗಳಾಗುತ್ತವೆ.

ತಂಬಾಕಿನಲ್ಲಿರುವರಾಸಾಯಿನಿಕಗಳು

ನಿಕೊಟೀನ್ಇದ್ದುಟಬೇಕಮ್ಮತ್ತುರಸ್ಟಿಕಗಳೆರಡರಲ್ಲೂಇರುವಉತ್ತೇಜಕರಾಸಾಯನಿಕಮ್ಯಾಲಿಕ್, ಸಿಟ್ರಿಕ್ಇತ್ಯಾದಿಆಮ್ಲಗಳೊಂದಿಗೆಇದ್ದುಸೇರಿಕೊಂಡಿದೆ. ತಂಬಾಕಿನಜಾತಿ, ಬೆಳೆಯುವಪ್ರದೇಶದಹವೆಮತ್ತುಕೃಷಿಹಾಗೂಹದಗೊಳಿಸುವಮತ್ತುಹದಗೊಳಿಸುವರೀತಿಇವುಗಳನ್ನುಅವಲಂಬಿಸಿನಿಕೊಟೀನ್ಮೊತ್ತವ್ಯತ್ಯಾಸವಾಗುತ್ತದೆ. ಆಲ್ಕಲಾಯ್ಡ್ಕಡಿಮೆಇರುವ (ಮೇರಿಲ್ಯಾಂಡ್ಮುಂತಾದಕೆಲವುಜಾತಿಗಳಲ್ಲಿ) ನಾರನಿ, ಕೊಟೀನ್ಎಂಬರಾಸಾಯನಿಕನಿಕೊಟೀನಿಗಿಂತಹೆಚ್ಚುಇರುತ್ತದೆ. ಬಲಿತಬೀಜಗಳಲ್ಲಿನಿಕೊಟೀನ್ಇರುವುದಿಲ್ಲ. ಆದರೆಬೀಜಮೊಳೆತೊಡನೆಇದುಉತ್ಪತ್ತಿಯಾಗತೊಡಗುತ್ತದೆ. ಸಾಮಾನ್ಯವಾಗಿಇದುಬೇರುಗಳಲ್ಲಿಉತ್ಪತ್ತಿಯಾಗಿಎಲೆಗಳಲ್ಲಿಸಂಚಿತವಾಗುತ್ತದೆ. ಗಿಡದಯಾವುದೊಂದುಭಾಗದಪೋಷಣೆಯಲ್ಲಿನಿಕೊಟೀನ್ಅವಶ್ಯಕವೇಎಂಬುವುದುಇನ್ನೂಅವಗತವಿಲ್ಲ. ಭಾರತದಲ್ಲಿನಬೇರೆಬೇರೆತಂಬಾಕುಗಳಲ್ಲಿನಿಕೊಟೀನಿನಪ್ರಮಾಣಈಕೆಳಗಿನಂತಿದೆ.

  • ಹುಕ್ಕಾತಂಬಾಕು (ಟುಬೇಕಮ್) -0.5% ರಿಂದ5%
  • ಹುಕ್ಕಾತಂಬಾಕು ( ರಸ್ಟಿಕ) -2% ರಿಂದ5%
  • ನಸ್ಯದತಂಬಾಕು -3.2% ರಿಂದ8%
  • ಶುದ್ಧನಿಕೊಟೀನುಬಣ್ಣವಿಲ್ಲದದ್ರಾವಣ.
  • ತಂಬಾಕುಸೇವನೆಯಹಾನಿಕಾರಕಪರಿಣಾಮಗಳಬಗ್ಗೆಜಾಗೃತಿಮೂಡಿಸುವುದು.
  • ತಂಬಾಕುಉತ್ಪನ್ನಗಳಸೇವನೆ, ಉತ್ಪಾದನೆಮತ್ತುಪೂರೈಕೆಯನ್ನುಕಡಿಮೆಮಾಡುವುದು.
  • ಸಿಗರೇಟ್ಮತ್ತುಇತರೆತಂಬಾಕುಉತ್ಪನ್ನಗಳಕಾಯ್ದೆ(ಕೋಟ್ಪಾ)2003 ರನ್ನುಪರಿಣಾಮಕಾರಿಯಾಗಿಜಾರಿಮಾಡುವುದು.
  • ತಂಬಾಕುನಿಯಂತ್ರಣಮತ್ತುತಡೆಗಟ್ಟುವಿಕೆಗಾಗಿವಿಶ್ವಆರೋಗ್ಯಸಂಸ್ಥೆಯಎಫ್.ಸಿ.ಟಿ.ಸಿಯಕಾರ್ಯತಂತ್ರಗಳನ್ನುಅನುಷ್ಠಾನಮಾಡುವುದು
  • ಆರೋಗ್ಯ ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ತರಬೇತಿ ನೀಡುವುದು.
  • ಶಾಲೆಗಳು, ಕೆಲಸದ ಸ್ಥಳಗಳು, ಸಾರ್ವಜನಿಕ ಸ್ಥಳ ಇತ್ಯಾದಿಗಳನ್ನು ಒಳಗೊಂಡತೆ ಸೂಕ್ತವಾದ ಐಇಸಿ ಚಟುವಟಿಕೆಗಳನ್ನು ಮತ್ತು ಸಾಮೂಹಿಕ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುವುದು.
  • ತಂಬಾಕು ಬಳಕೆಯನ್ನು ತ್ಯಜಿಸಲು ಸೇವೆಯನ್ನು ಮತ್ತು ತಂಬಾಕು ಅವಲಂಬನೆಯ ಚಿಕಿತ್ಸೆಗಾಗಿ ಸೌಲಭ್ಯಗಳನ್ನು ಒದಗಿಸುವುದು.
  • ಎನ್ .ಹೆಚ್.ಎಂ.ಇತರೆ ಕಾರ್ಯಕ್ರಮಗಳೊಂದಿಗೆ ಸಂಯೋಜನೆ.
  • ತಂಬಾಕು ನಿಲುಗಡೆ ವರ್ಧನೆಗೆ ತಂಬಾಕು ಕೃಷಿಯಲ್ಲಿ 2030 ರ ಒಳಗೆ 30% ರಷ್ಟು ಕಡಿತಕ್ಕೆ ಗುರಿಯನ್ನು ಸಾಧಿಸಲು ಕ್ರಿಯಾಯೋಜನೆ.
  • ಎಲ್ಲಾ ಮಧ್ಯಸ್ಥಗಾರರು, ಶೈಕ್ಷಣಿಕ ಸಂಸ್ಥೆಗಳು ಮತ್ತು ವೃತ್ತಿಪರ ಸಂಸ್ಥೆಗಳೊಂದಿಗೆ ಒಕ್ಕೂಟ.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದಉದ್ದೇಶಗಳು:

  • ಆರೋಗ್ಯಮತ್ತುಸಾಮಾಜಿಕಕಾರ್ಯಕರ್ತರಿಗೆ, ಶಾಲಾಶಿಕ್ಷಕರಿಗೆ, ತನಿಖಾದಳದಜಾರಿಅಧಿಕಾರಿಗಳಿಗೆ,ವಿವಿಧಇಲಾಖೆಗಳಸರ್ಕಾರಿಅಧಿಕಾರಿಗಳಿಗೆ,ಪೋಲೀಸ್ಇಲಾಖೆಅಧಿಕಾರಿಗಳಿಗೆ, ಆಶಾಕಾರ್ಯಕರ್ತರಿಗೆ, ಕಾರ್ಮಿಕರರಿಗೆ, ಅಂಗನವಾಡಿಕಾರ್ಯಕರ್ತರಿಗೆ,ವಕೀಲರಿಗೆ,ಎನ್ಜಿಒಗಳಪ್ರತಿನಿಧಿಗಳಿಗೆ,, ಸ್ವಸಹಾಯ ಗುಂಪುಗಳು, ಯುವ ಕ್ಲಬ್‌ಗಳ ಸದ್ಯಸರಿಗೆ,, ಯಾವುದೇಮಧ್ಯಸ್ಥಗಾರರಿಗೆಗುರುತಿಸಿಕಾರ್ಯಕ್ರಮದ ಕುರಿತುತರಬೇತಿಯಆಯೋಜನೆ.
  • ತಂಬಾಕು ಸೇವನೆಯಿಂದಾಗುವ ದುಷ್ಟಾರಿಣಾಮದ ಕುರಿತು ಸಾರ್ವಜನಿಕರಿಗೆಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಮೂಲಕ ಅರಿವು ಮತ್ತು ಜಾಗೃತಿ ಮೂಡಿಸುವುದು.
  • ಸಂವೇದನಾಶೀಲಕಾರ್ಯಕ್ರಮಗಳುಮತ್ತುಶಾಲಾ ಮತ್ತು ಕಾಲೇಜು ಅರಿವು ಕಾರ್ಯಕ್ರಮಗಳ ಆಯೋಜನೆ.
  • ತಂಬಾಕು ಮುಕ್ತ ಶಾಲೆ ಮತ್ತು ಕಾಲೇಜುಗಳನ್ನಾಗಿಸಿ ಸ್ವಸ್ಥ ಸಮಾಜದ ನಿರ್ಮಾಣಮಾಡುವುದು.
  • ತನಿಖಾದಳದಜಾರಿಮೂಲಕತಂಬಾಕುನಿಯಂತ್ರಣಹಾಗೂಕಾನೂನುಗಳಮೇಲ್ವಿಚಾರಣೆ
  • ಗ್ರಾಮಮಟ್ಟದಚಟುವಟಿಕೆಗಳಿಗಾಗಿಪಂಚಾಯತ್ರಾಜ್ಸಂಸ್ಥೆಗಳೊಂದಿಗೆಸಮನ್ವಯಮತ್ತುಜಿಲ್ಲಾಮಟ್ಟದಲ್ಲಿ “ತಂಬಾಕುಮುಕ್ತಗ್ರಾಮ” ಎಂದುಘೋಷಿಸುವಕಾರ್ಯಕ್ರಮಗಳು.
  • ನಿರ್ದೀಷ್ಟ ಗುಂಪು ಚರ್ಚೆಯ ಮೂಲಕ ತಂಬಾಕು ಬಳಕೆ ಮಾಡುವವರನ್ನು ಗುರುತಿಸಿ ಅಂತಹ ಜನರಿಗೆ ತಂಬಾಕು ಸೇವನೆಯಿಂದಾಗುವ ದುಷ್ಟಾರಿಣಾಮದ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಉವುದು.
  • ತಂಬಾಕುವ್ಯಸನಮುಕ್ತಕೇಂದ್ರದಮೂಲಕಆಪ್ತಸಮಾಲೋಚನೆಮತ್ತುಚಿಕಿತ್ಸೆತಂಬಾಕುನಿಯಂತ್ರಣಮತ್ತುತಡೆಗಟ್ಟುವಿಕೆಗಾಗಿವಿಶ್ವಆರೋಗ್ಯಸಂಸ್ಥೆಯಎಫ್.ಸಿ.ಟಿ.ಸಿಯಕಾರ್ಯತಂತ್ರಗಳನ್ನುಅನುಷ್ಠಾನಮಾಡುವುದು.

ಭಾರತದಲ್ಲಿ ತಂಬಾಕು ಹೊರೆ:

ತಂಬಾಕುಭಾರತದಎಲ್ಲಾನಾಗರೀಕರಆರೋಗ್ಯಮತ್ತುಯೋಗಕ್ಷೇಮಕ್ಕೆದೊಡ್ಡಅಪಾಯವಾಗಿದೆ. ಹೃದಯರಕ್ತನಾಳದಕಾಯಿಲೆಗಳು,ಉಸಿರಾಟದಕಾಯಿಲೆಗಳುಸೇರಿದಂತೆಹೆಚ್ಚಿನಸಾಂಕ್ರಾಮಿಕವಲ್ಲದಕಾಯಿಲೆಗಳವಿಕಸನಕ್ಕೆಇದುಸಾಮಾನ್ಯಅಪಾಯಕಾರಿಅಂಶವಾಗಿದೆಮತ್ತುಕ್ಯಾನ್ಸರ್ 2016-17 ರಲ್ಲಿನಡೆಸಿದGATS-11 ಭಾರತದಲ್ಲಿಎಲ್ಲಾವಯಸ್ಕರಲ್ಲಿ10.7% ರಷ್ಟುಧೂಮಾಪಾನಮಾಡುತ್ತಿದ್ದರೆ, 21.4% ರಷ್ಟುವಯಸ್ಕರುಧೂಮಪಾನವಿಲ್ಲದತಂಬಾಕನ್ನುಬಳಸುತ್ತಾರೆತಂಬಾಕುಅದನ್ನುಬಳಸುವವ್ಯಕ್ತಿಯಮೇಲೆವ್ಯತಿರಿಕ್ತಪರಿಣಾಮಬೀರುವುದಲ್ಲದೆ, ಸೆಕೆಂಡ್ಹ್ಯಾಂಡ್ಹೊಗೆಯಮೂಲಕಪರೋಕ್ಷವಾಗಿಜನರಮೇಲೆಪರಿಣಾಮಬೀರುತ್ತದೆ.

ತಂಬಾಕು ಸೇವನೆಯಿಂದ ಆರೋಗ್ಯದ ಹೊರೆ:

  • ಶ್ವಾಸಕೋಶದಕ್ಯಾನ್ಸರ್, ಬಾಯಿಕ್ಯಾನ್ಸರ್,ಗರ್ಭಕಂಠದಕ್ಯಾನ್ಸರ್, ಸನ್ತಕ್ಯಾನ್ಸರ್,ಗರ್ಭಪಾತ
  • ಹೃದಯಸಂಬಂಧಿತಮಾರಣಾಂತಿಕಖಾಯಿಲೆಗಳು
  • ಕರೊನರಿಹೃದಯಖಾಯಿಲೆ, ಹೃದಯರಕ್ತನಾಳತೊಂದರೆ. ಪುನಃಪುನಃಕಾಡುವಎದೆಯಸೋಂಕುಗಳು
  • ಪಾರ್ಶ್ವವಾಯು,ನ್ಯುಮೊನಿಯ, ಕ್ಷಯರೋಗ,ಬಾಯಿಅಲ್ಸರ್, ಗ್ಯಾಂಗ್ರಿನ್, ಅಸ್ತಮ
  • ಅಲ್ಜೈಮರ್ಖಾಯಿಲೆ, ಕಣ್ಣಿನಪೊರೆ,
  • ನೆನಪಿನಶಕ್ತಿಕುಂದಿರುವುದು
  • ಜ್ಞಾನಗ್ರಹಣದಕಾರ್ಯಹೀನತೆ
  • ಧ್ವನಿಪೆಟ್ಟಿಗೆತೊಂದರೆ
  • ಮೂತ್ರಜನಕಾಂಗಮತ್ತುಮೂತ್ರಚೀಲತೊಂದರೆ
  • ಅನ್ನನಾಳ, ಅಡ್ರಿನಲ್ಗ್ರಂಥಿ, ಮೂಗಿನರಂದ್ರದತೊಂದರೆ
  • ಪುರುಷರಲ್ಲಿಫಲವತ್ತತೆಯಲ್ಲಿಕ್ಷೀಣತೆಮತ್ತುಲೈಂಗಿಕದುರ್ಬಲತೆ
  • ಕಡಿಮೆತೂಕದಮಗುವಿನಜನನ
  • ತಂಬಾಕುಬಳಕೆಯಿಂದಪುರುಷರಲ್ಲಿಕ್ಯಾನ್ಸರ್ 30% ಮತ್ತುಸ್ತ್ರೀಯರಲ್ಲಿ 20%ಕ್ಯಾನ್ಸರ್ಗೆಕಾರಣ.

ಧೂಮಪಾನಸಹಿತರೂಪಗಳು:

  • ಬೀಡಿಗಳು
  • ಸಿಗರೇಟ್ಮತ್ತುಸಿಗಾರ್
  • ಹುಕ್ಕಾ
  • ಚೆರೂಟ್ಸ್
  • ಚುಟ್ಟಾಸ್
  • ಧುಮತಿ
  • ಪೈಪ್
  • ಹುಕ್ಲಿಸ್
  • ಚಿಲ್ಲಮ್
  • ಧೂಮಪಾನರಹಿತರೂಪಗಳು:
  • ಪಾನ್ (ಬೆಟಲ್ಕ್ವಿಡ್)
  • ತಂಬಾಕಿನೊಂದಿಗೆಪಾನ್ಮಸಾಲ
  • ತಂಬಾಕು,ಅರೆಕಾನಟ್ಮತ್ತುಸ್ಲ್ಯಾಕ್ಡ್ಸುಣ್ಣತಯಾರಿಕೆ : ಮಾವಾ
  • ಖೈನಿ
  • ನಶ್ಯ/ನಸೀಪುಡಿ
  • ಕಡಿಪುಡ್ಡಿ
  • ತಂಬಾಕು /ಗುಟ್ಕಾಜೊತೆಪಾನ್ಮಸಾಲ



ತಂಬಾಕು ಸೇವನೆಯಿಂದಾಗುವ ದುಷ್ಟಾರಿಣಾಮದ ಕುರಿತು ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಮೂಲಕ ಅರಿವು ಮತ್ತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ತಂಬಾಕು ವ್ಯಸನಕ್ಕೆ ಯುವ ಜನತೆ ಬಲಿಯಾಗದಂತೆ ವ್ಯಕ್ತಿಗಳಲ್ಲಿ, ಸಮಾಜದಲ್ಲಿ ಮತ್ತು ಸಮುದಾಯಗಳಲ್ಲಿ ಸಕಾರಾತ್ಮಕ ನಡವಳಿಕೆಯನ್ನು ಉತ್ತೇಜಿಸಲು ಮಾಹಿತಿ ಶಿಕ್ಷಣ ಮತ್ತು ಸಂವಹನ ಬಳಸಿಕೊಂಡು ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಲುಚಿಕ್ಕಮಗಳೂರು ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಉತ್ತೇಜನವನ್ನು ನೀಡಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಶಾಲಾ ಕಾರ್ಯಕ್ರಮ

ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಯುವ ಪೀಳಿಗೆಯನ್ನು ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್ ನ ಬಳಕೆಯಿಂದ ರಕ್ಷಣೆ ಮಾಡುವುದು  ಎಂಬ  ಘೋಷವಾಕ್ಯದಂತೆ ಜಿಲ್ಲೆಯ ಶಾಲೆಗಳು ಮತ್ತು ಕಾಲೇಜುಗಳ ಮ್ಯಾಪಿಂಗ್ ನ ಸಮಗ್ರ ಕ್ರಿಯಾ ಯೋಜನೆಯನ್ನು ಮಾಡಿ ಅದರಂತೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು  ಡಿಡಿಪಿಐ ಮತ್ತು ಡಿಡಿಪಿಯುನಿಂದ ಅನುಮೋದನೆ ಪಡೆಯುವ ಮೂಲಕ ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದಾಗುವ ದುಷ್ಟಾರಿಣಾಮದ ಕುರಿತು ಹಾಗೂ ಶಿಕ್ಷಣ ಸಂಸ್ಥೆಯ 100 ಗಜಗಳ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅರಿವು ಮತ್ತು ಜಾಗೃತಿ ಮೂಡಿಸಿ ಚರ್ಚೆಯೊಂದಿಗೆವಿದ್ಯಾರ್ಥಿಗಳು ಚಿತ್ರಕಲೆ ಸ್ಪರ್ಧೆ/ ಪ್ರಬಂಧ ಸ್ಪರ್ಧೆ/ ಚರ್ಚಾ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡು ತಂಬಾಕು ಮುಕ್ತ ಶಾಲೆ ಮತ್ತು ಕಾಲೇಜುಗಳನ್ನಾಗಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಚಿಕ್ಕಮಗಳೂರು ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಪ್ರತಿ ವರ್ಷ 100 ಶಾಲೆಗಳ ಗುರಿಯನ್ನು ಹೊಂದಿ ಇದುವರೆಗೂ 300 ಶಾಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಗುಲಾಬಿ ಅಭಿಯಾನ

ಚಿಕ್ಕಮಗಳೂರುಜಿಲ್ಲೆಯಲ್ಲಿಮತ್ತುಎಲ್ಲಾತಾಲ್ಲೂಕುಗಳಲ್ಲಿಏಕಕಾಲದಲ್ಲಿಗುಲಾಬಿಆಂದೋಲನಕಾರ್ಯಕ್ರಮವನ್ನುಶಾಲಾಮಕ್ಕಳು, ನರ್ಸಿಂಗ್ವಿದ್ಯಾರ್ಥಿಗಳು,ಆಶಾಮತ್ತುಆರೋಗ್ಯಕಾರ್ಯಕರ್ತೆಯರಮುಖಾಂತರಪ್ರತಿವರ್ಷಗುಲಾಬಿಆಂದೋಲನಕಾರ್ಯಕ್ರಮವನ್ನುಜಾರಿಗೊಳಿಸಿದ್ದು, ಸದರಿಕಾರ್ಯಕ್ರಮದಲ್ಲಿಶಿಕ್ಷಣಸಂಸ್ಥೆಯ 100 ಗಜಗಳಒಳಗೆತಂಬಾಕುಉತ್ಪನ್ನಗಳನ್ನುಮಾರಾಟಮಾಡುವಪ್ರದೇಶದತಂಬಾಕುಅಂಗಡಿಮಾಲೀಕರಿಗೆಹಾಗೂಸಾರ್ವಜನಿಕರಿಗೆಕೆಂಪುಗುಲಾಬಿಯನ್ನು (ಪ್ರೀತಿಮತ್ತುಗೌರವದಸಂಕೇತ) ಹಸ್ತಾಂತರಿಸುವುದರಜೊತೆಗೆತಂಬಾಕುಸೇವನೆಯಿಂದಾಗುವಉಂಟಾಗುವದುಷ್ಪರಿಣಾಮಗಳುಹಾಗೂಕೋಟ್ಪಾ-2003 ಕಾಯ್ದೆಯಉಲ್ಗಂಘನೆಮಾಡದಂತೆವಿನಂತಿಸಿಮನವರಿಕೆಮಾಡುವುದುಗುಲಾಬಿಆಂದೋಲನದಮುಖ್ಯಉದ್ದೇಶವಾಗಿರುತ್ತದೆ.

ಹಳದಿ ಬಣ್ಣ ಬರಹ ಅಭಿಯಾನ 

ಶೈಕ್ಷಣಿಕ ಸಂಸ್ಥೆಗಳ ಆವರಣದಿಂದ  100 ಗಜಗಳ ಒಳಗೆ ಯಾವುದೇ ರೀತಿಯ ತಂಬಾಕು ಉತ್ಪನ್ನ ಮಾರಾಟ  ಮಾಡುವ ಅಂಗಡಿ/ಮಳಿಗೆ ಇರುವಂತಿಲ್ಲ. ಇಂತಹ ಶೈಕ್ಷಣಿಕ ಮುಂಭಾಗದಲ್ಲಿ ತಂಬಾಕು ಮುಕ್ತ ಶಾಲೆ/ ಕಾಲೇಜು ಪ್ರದೇಶ ಎಂಬ ಹಳದಿ ಪಟ್ಟಿಯ ಬಣ್ಣವನ್ನು ಬರೆಸುವ ಕಾರ್ಯಚಟುವಟಿಕೆಯಾಗಿದೆ. ಇದರ ಮುಖ್ಯ ಉದ್ದೇಶವೆನೆಂದರೆ, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಾಲಾ/ ಕಾಲೇಜು ಆವರಣದಿಂದ 100 ಗಜಗಳ ಅಂತರದಲ್ಲಿ ತಂಬಾಕು ಉಪಯೋಗ ಹಾಗೂ ತಂಬಾಕು ಉತ್ಪನ್ನ ಮಾರಾಟದಿಂದ ಮುಕ್ತ ವಾತಾವರಣ ಹೊಂದಿದ್ದು ತಂಬಾಕು ಮುಕ್ತ ಶಾಲೆ / ಕಾಲೇಜು ಎಂಬ ಘೋಷಣೆಯೊಂದಿಗೆ ಪೋಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ.

ನಿರ್ದೀಷ್ಟ ಗುಂಪು ಚರ್ಚೆ (ಎಫ್‌.ಜಿ.ಡಿ.)

ನಿರ್ದೀಷ್ಟ ಗುಂಪು ಚರ್ಚೆ (ಎಫ್‌ಜಿಡಿ)ಯ ಮೂಲಕ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಕುರಿತು ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಮತ್ತು ಗ್ರಾಮ ಮಟ್ಟದಲ್ಲಿ ವಿವಿಧ ಸ್ತರದ ಅಂದರೆ ಸ್ವಸಹಾಯ ಗುಂಪುಗಳು, ಯುವ ಕ್ಲಬ್‌ಗಳು, ಶಾಲೆ ಮತ್ತು ಕಾಲೇಜು, ಆರೋಗ್ಯ ಶಿಬಿರ, ಪೋಷಕರ ಸಭೆ, ರೋಟರಿ ಕ್ಲಬ್ /ಲಯನ್ಸ್ ಕ್ಲಬ್, ಸಾರ್ವಜನಿಕ ಆಸ್ಪತ್ರೆ, ಇತ್ಯಾದಿಗಳಲ್ಲಿನಿರ್ದೀಷ್ಟ ಗುಂಪು ಚರ್ಚೆಯ ಮೂಲಕ ತಂಬಾಕು ಬಳಕೆ ಮಾಡುವವರನ್ನು ಗುರುತಿಸಿ ಅಂತಹ ಜನರಿಗೆ ತಂಬಾಕು ಸೇವನೆಯಿಂದಾಗುವ ದುಷ್ಟಾರಿಣಾಮದ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಿ ತಂಬಾಕು ವ್ಯಸನ ಮುಕ್ತ ಕೇಂದ್ರದ ಸೇವೆ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು ಹಾಗೂತಂಬಾಕು ಸೇವನೆಯನ್ನು ತ್ಯಜಿಸಲು ಪ್ರೇರೇಪಿಸಿ, ತಂಬಾಕನ್ನು ಸಂಪೂರ್ಣವಾಗಿ ತ್ಯಜಿಸಿದವರು ಇತರರನ್ನು ಪ್ರೇರೇಪಿಸಲು ಅವರ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ನಿರ್ದೀಷ್ಟ ಗುಂಪು ಚರ್ಚೆಯ ಮೂಲಕ ವೇದಿಕೆಯನ್ನು ಸೃಷ್ಟಿಸುತ್ತಿದೆ.

ಸಹಿ ಸಂಗ್ರಹ ಅಭಿಯಾನ  

ಸಾರ್ವಜನಿಕರು, ಹಿರಿಯ ಅಧಿಕಾರಿಗಳ ವೃಂದ, ಹಿರಿಯ/ಕಿರಿಯ ಆರೋಗ್ಯ ನೀರಿಕ್ಷಕರು, ಎಎನ್ಎಂಗಳು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು, ಅರೆ ವೈದ್ಯಕೀಯ ವಿದ್ಯಾರ್ಥಿಗಳು, ಶೈಕ್ಷಣಿಕ ವಿದ್ಯಾರ್ಥಿಗಳು ಸಂಯುಕ್ತದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡುತಂಬಾಕು ಸೇವನೆ ಮಾಡುವುದಿಲ್ಲವೆಂಬ ಸಹಿ ಹಾಕಿಸುವುದರ ಮೂಲಕ ತಂಬಾಕು ಮುಕ್ತ ಸಮಾಜವನ್ನು ಕಟ್ಟಲು ಎಲ್ಲೂರೂ ಸಹ ಕೈ ಜೋಡಿಸಬೇಕು ಎಂಬುದರ ಬಗ್ಗೆ  ಅರಿವು ಮತ್ತು  ಜನ ಜಾಗೃತಿ ಮೂಡಿಸುವುದು ಈ ಅಭಿಯಾನದ  ಉದ್ದೇಶವಾಗಿದೆ.

ವಿಶ್ವ ತಂಬಾಕು ರಹಿತ ದಿನಾಚರಣೆ

ಪ್ರತಿವರ್ಷವುಸಹಮೇ 31,ರಂದುವಿಶ್ವತಂಬಾಕುರಹಿತದಿನಾಚರಣೆಯನ್ನುಆಚರಿಸಲಾಗುತ್ತಿದೆ. ಇದರಮುಖ್ಯಉದ್ದೇಶಸಾರ್ವಜನಿಕರಿಗೆಆದರಲ್ಲೂಮುಖ್ಯವಾಗಿಇಂದಿನಯುವಜನಾಂಗಕ್ಕೆತಂಬಾಕುಮತ್ತುತಂಬಾಕುಉತ್ಪನ್ನಗಳಸೇವನೆಯಿಂದಾಗುವಮಾನಸಿಕಹಾಗೂದೈಹಿಕಆರೋಗ್ಯದಮೇಲೆಉಂಟಾಗುವದುಷ್ಪರಿಣಾಮಗಳಬಗ್ಗೆಅರಿವುಮೂಡಿಸುವುದುಮತ್ತುಈಗಾಗಲೇಈವ್ಯಸನವನ್ನುಅಭ್ಯಾಸಮಾಡಿಕೊಂಡಿರುವವರಿಗೆತಿಳುವಳಿಕೆನೀಡಿತಂಬಾಕುತ್ಯಜಿಸಲುಸುಲಭೋಪಾಯಗಳಮೂಲಕಅವರನ್ನುವ್ಯಸನಮುಕ್ತರನ್ನಾಗಿಮಾಡವುದು

ತಂಬಾಕು ವ್ಯಸನ ಮುಕ್ತ ಕೇಂದ್ರ (ಟಿ.ಸಿ.ಸಿ.)

ತಂಬಾಕುನಿಯಂತ್ರಣಕೋಶದಮತ್ತೊಂದುಭಾಗವಾಗಿಜಿಲ್ಲಾಆಸ್ಪತ್ರೆಚಿಕ್ಕಮಗಳೂರು ಇಲ್ಲಿನರೂಂನಂ. 31() ಎನ್.ಸಿ.ಡಿ. ಕ್ಲಿನಿಕ್ ಹಾಗೂ ರೂಂ ನಂಬರ್ 105 ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರ ಜಿಲ್ಲಾ ಆಸ್ಪತ್ರೆಯಲ್ಲಿಆಪ್ತಸಮಾಲೋಚನೆಮತ್ತುಚಿಕಿತ್ಸೆನೀಡಲುತಂಬಾಕುವ್ಯಸನಮುಕ್ತಕೇಂದ್ರಸ್ಥಾಪಿಸಲಾಗಿದ್ದು, ಇದುವರೆಗೂ 805ವ್ಯಸನಿಗಳಿಗೆಆಪ್ತ ಸಮಲೋಚನೆಯನ್ನು ಒದಗಿಸಲಾಗಿದೆ. ತಂಬಾಕುವ್ಯಸನಿಗಳಿಗೆಅವರತಂಬಾಕುವ್ಯಸನದಅನುಭವವನ್ನುಹಂಚಿಕೊಳ್ಳಲುತಂಬಾಕುಮುಕ್ತರಾಗಲುಕೇಂದ್ರಿಕೃತಗುಂಪುಚರ್ಚೆನಡೆಸಲಾಗುತ್ತಿದೆಜೊತೆಗೆತಂಬಾಕುವ್ಯಸನಮುಕ್ತಕೇಂದ್ರದಿಂದ 46ಕ್ಯಾಂಪ್‍ಗಳನ್ನುಆಯೋಜಿಸಲಾಗಿದೆ.

ತನಿಖಾ ದಳದ ಕಾರ್ಯಚರಣೆ

ಚಿಕ್ಕಮಗಳೂರು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮದ  ಪ್ರಗತಿಯಂತೆ ಜಿಲ್ಲಾ ಮತ್ತು ತಾಲ್ಲೂಕು ತನಿಖಾ ದಳದ ವಿವಿಧ  ಇಲಾಖೆಗಳ ಸಹಯೋಗದಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವುದರ ಜೊತೆಗೆ ಜಗಿಯುವ ತಂಬಾಕು ಪಾನ್ ಮಸಾಲ, ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ಬಳಸಿ ಉಗುಳುವುದರಿಂದ ಒಬ್ಬರಿಂದ  ಇನ್ನೊಬ್ಬರಿಗೆ ಕೋವಿಡ್ -19 ವೈರಸ್ ಹರಡು ಭೀತಿ ಇರುತ್ತದೆ ಜೊತೆಗೆ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ನ್ಯಮೋನಿಯ ಹರಡಲು ಕಾರಣವಾಗಬಹುದು ಆದ್ದರಿಂದ ಸಾರ್ವಜನಿಕರ  ಆರೋಗ್ಯ ಹಿತ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್ ಮಸಾಲ, ಜರ್ದಾ, ಖೈನಿ, ಇತ್ಯಾದಿ ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡುವುದನ್ನು ನಿಲ್ಲಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.ಆದಾಗ್ಯೂ ಕೋಟ್ಪಾ -2003 ರ ಕಾಯ್ದೆಯ ಉಲ್ಲಂಘನೆ ಮಾಡಲಾಗುತ್ತಿದೆ.ಅಂತವರ ವಿರುದ್ದ ತನಿಖಾ ದಳದ ಕಾರ್ಯಚರಣೆಯನ್ನು ಜಿಲ್ಲಾದ್ಯಂತ ಕೈಗೊಂಡು2018-19, 2019-20, 2020-21, 2021-22 ನೇ ಸಾಲಿನ ಭೌತಿಕ ವರ್ಷದದಲ್ಲಿ ಕೋಟ್ಪಾ -2003ರ ಕಾಯ್ದೆಯ  ಅಡಿಯಲ್ಲಿ ಒಟ್ಟು 130 ತನಿಖಾ ದಳದ ಕಾರ್ಯಚರಣೆಯನ್ನು ನಡೆಸಲಾಗಿದ್ದು, ಇದರಂತೆ ಸೆಕ್ಷನ್ 4ರ ಅಡಿಯಲ್ಲಿ ಒಟ್ಟು 2751 ಪ್ರಕರಣ ದಾಖಲಿಸಿ ದಂಡದ ಮೊತ್ತ ರೂ. 330070/-ಸೆಕ್ಷನ್ 6() ಅಡಿಯಲ್ಲಿ ಒಟ್ಟು 669 ಪ್ರಕರಣ ದಾಖಲಿಸಿ ದಂಡದ ಮೊತ್ತ ರೂ. 70915/-ಸೆಕ್ಷನ್ 6(ಬಿ) ಅಡಿಯಲ್ಲಿ ಒಟ್ಟು 174 ಪ್ರಕರಣ ದಾಖಲಿಸಿ ದಂಡದ ಮೊತ್ತ ರೂ. 17035/-ಒಟ್ಟು 3494 ಪ್ರಕರಣ ದಾಖಲಿಸಿ ಮೊತ್ತ: 418020/- ರೂ. ಗಳನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ.

ನವೀಕರಿಸಿದ ದಿನಾಂಕ: 25/10/2021
ಪುಟದ ಮಾಹಿತಿ ನೀಡಿದವರು: ಜಿಲ್ಲಾ ತಂಬಾಕು ನಿಯಂತ್ರಣ ಕೋಶ
ಜಿಲ್ಲಾ ಸರ್ವೆಲೆನ್ಸ್ ಘಟಕ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಚಿಕ್ಕಮಗಳೂರು-577101.
ಇಮೇಲ್ ಐಡಿ: ntcpchikmagalur[at}gmail[dot]com

ಈ ಪುಟದ ಭೇಟಿ ನೀಡಿದವರು ಸಂಖ್ಯೆ :
web counter